ಬುಧವಾರ, ಆಗಸ್ಟ್ 9, 2023

ಡಾ. ಎಂ. ಭೈರಪ್ಪ ( ಕುಪ್ಪನಹಳ್ಳಿ ಎಂ. ಭೈರಪ್ಪ ) Dr. M. Byrappa (Kuppanahalli M. Byrappa)

 ಕಿರುಪರಿಚಯ :-

ಡಾ. ಎಂ. ಭೈರಪ್ಪ ( ಕುಪ್ಪನಹಳ್ಳಿ ಎಂ. ಭೈರಪ್ಪ )

Dr. M. Byrappa (Kuppanahalli M. Byrappa)


( ರಾಷ್ಟ್ರಪತಿ ಪ್ರಶಸ್ತಿ ೨೦೧೯ರ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪುರಸ್ಕೃತ )

ಊರು: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮ.

ಹುಟ್ಟಿದ್ದು:  ೨೭-೦೬-೧೯೮೬ರಲ್ಲಿ.

ತಂದೆ ಮುನಿಸೊಣ್ಣಪ್ಪ ಹಾಗೂ ತಾಯಿ ಲಕ್ಷ್ಮಮ್ಮ.

ಓದಿದ್ದು:

ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಬಿ.(HEK) ಪದವಿ

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರ‍್ಯಾಂಕ್‌ನೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ.

ಪಿಎಚ್.ಡಿ:

ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ.ಕೃಷ್ಣಮೂರ್ತಿ ಹನೂರು ಅವರ ಮಾರ್ಗದರ್ಶನದಲ್ಲಿ ಆಧುನಿಕ ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ.

ಇತರೆ ಅಧ್ಯಯನ:

ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಭಾಷಾಂತರ’, ‘ಆಂಗ್ಲ ಸಾಹಿತ್ಯ’, ‘ಶಾಸನಶಾಸ್ತ್ರ ಹಾಗೂ ಪ್ರಾಕೃತ’ - ಈ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಗಳ ಅಧ್ಯಯನ.

ಸೇವಾನುಭವ:

·         ರಾಷ್ಟ್ರೀಯ ಸಂತ ಕನಕದಾಸರ ಸಂಶೋಧನ ಕೇಂದ್ರದ ಕರ್ನಾಟಕ ಸಮಗ್ರ ತತ್ವಪದ ಯೋಜನೆಯ ಮೈಸೂರು ಜಿಲ್ಲಾ ಕ್ಷೇತ್ರತಜ್ಞರಾಗಿ ಎರಡು ವರ್ಷ ಕಾರ್ಯನಿರ್ವಹಣೆ.

·         ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವಿಭಾಗದಲ್ಲಿ ಒಂದು ವರ್ಷ ಪತ್ರಕರ್ತ.

·         ಮೈಸೂರು ವಿವಿಯ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಎರಡು ವರ್ಷಗಳು ಕನ್ನಡ ಉಪನ್ಯಾಸಕರಾಗಿ ಸೇವೆ.

·         ಮೈಸೂರಿನಲ್ಲಿರುವ ಭಾರತ ಸರ್ಕಾರದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಮೂರುವರೆ ವರ್ಷ ಸಹಸಂಶೋಧಕರಾಗಿ ಕಾರ್ಯನಿರ್ವಹಣೆ.

·         ಸದ್ಯಕ್ಕೆ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ (ಸ್ವಾಯತ್ತ) ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ.

ಸಂಶೋಧನ ಅನುಭವ

·         ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ಕೋಲಾರ ಜಿಲ್ಲೆಯ ದಲಿತ ಹೋರಾಟಗಾರರ ಅನುಭವ ಕಥನಗಳು

·         ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ಕೋಲಾರ ಜಿಲ್ಲೆಯ ದಲಿತ ಕ್ರೆöÊಸ್ತರ ಸಾಂಸ್ಕೃತಿಕ ಶೋಧ’.

·         ಕರ್ನಾಟಕ ನಾಟಕ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ಕನ್ನಡ ರಂಗಭೂಮಿಯಲ್ಲಿ ಅಂಬೇಡ್ಕರ್‌ಯಾನ’,

·         ಭಾರತ ಸರ್ಕಾರದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ವಚನ ಸಾಹಿತ್ಯದಲ್ಲಿ ಬೌದ್ಧತತ್ವ’, ಕನ್ನಡ ಭಕ್ತಿ ಪರಂಪರೆ ಮತ್ತು ಸಿನಿಮಾ ಎಂಬ ಸಂಶೋಧನ ಯೋಜನೆಗಳು.

·         ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಫೆಲೋಷಿಫ್ ಅನುವಾದ ಯೋಜನೆಯ ಅಂಗವಾಗಿ ತೆಲುಗಿನ ಡಾ.ಬಿ.ಎಸ್.ಎಲ್.ಹನುಮಂತರಾವು ವಿರಚಿತ ಆಂಧ್ರಪ್ರದೇಶದ ಜೈನಬೌದ್ಧ ಧರ್ಮಗಳು ಕೃತಿಯ ಕನ್ನಡಕ್ಕೆ ಅನುವಾದ

·         ಹಲವಾರು ವಿಚಾರಸಂಕಿರಣಗಳಲ್ಲಿ 8೦ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳ ಮಂಡನೆ.

ಸಾಹಿತ್ಯಕೃಷಿ:

ಕಾವ್ಯ:-

ಬೇಲಿಗಿಡಗಳು ಮಾತಾಡುತಾವೆ,

ಅರಳಿನೆರಳಿನ ಗುಡಿಸಲ ಧ್ಯಾನ;

ವಿಮರ್ಶೆ:-

ಕರ್ಣರಸಾಯನ,

ಒಡಲುರಿ,

ನಾಟಕ ಸಂಸ್ಕೃತಿ ದರ್ಶಕ,

ಸಾಹಿತ್ಯರಂಗದಲ್ಲಿ,

ಜನಮುಖಿ(ಡಾ.ಎಲ್.ಬಸವರಾಜು ಅವರ ಕೃತಿಕೈಪಿಡಿ),

ಹರಿಶ್ಚಂದ್ರ ಕಥನ: ನಾಟಕೀಯತೆ ಮತ್ತು ಸಮಕಾಲೀನತೆ,

ಸಂಶೋಧನೆ:-

ಅಂತರಗಂಗವ್ವ,

ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ,

ಬೌದ್ಧಯಾನಿ ಚಾಮುಂಡಿ,

ಬಸವ ಸಿನಿಮಾ ಬುದ್ಧ ಪ್ರತಿಮಾ,

ವಡ್ಡಾರಾಧನೆ ಕಥನ: ಸಾಂಸ್ಕೃತಿಕ ಅನುಸಂಧಾನ;

ನಿಚ್ಚಂ ಪೊಸತು,

ನಿಸ್ಸೀಮ ನುಡಿಯಾನ

ನುಡಿಕುಲುಮೆಯ ಕಿಡಿಗನ್ನಡಿ

ಸಂಪಾದನೆ:-

ಬುದ್ಧನಗೆಯ ತಾಯಿನದಿ,

ಬೆಳಕಿನ ತಾಯಿ,

ಸಮತಾ ಪಂಜು,

ಸಂಶೋಧನಯಾನ,

ಬೋಧಿಯಾನ,

ಶರಣಯಾನ,

ಬೆಳಗು ಬೆಳಕೆ ಕತ್ತಲೊಡಲಿಂದ (ಮೈಸೂರು-ಚಾಮರಾಜನಗರದ ಪ್ರಾತಿನಿಧಿಕ ತತ್ವಪದಗಳು),

 ಮುನಿದರ್ಪಣ,

ಗ್ರಾಮೀಣ ಸಂಸ್ಕೃತಿ ಚರಿತ್ರೆ-ಸಂಪುಟ.೧,

ಮುತ್ತುಮುಳುಗ (ಡಾ.ಎಲ್.ಬಸವರಾಜು ಜನ್ಮಶತಮಾನೋತ್ಸವ ನೆನಪಿನ ಸಂಪುಟ),

ಶಾಸ್ತ್ರೀಯ ಕನ್ನಡ ಪಠ್ಯಗಳ ಸಾಂಸ್ಕೃತಿಕ ಅನುಸಂಧಾನ, ಅಭಿಜಾತ,

ಡಾ.ವಿ.ಎಂ. ಸಾಹಿತ್ಯ ವಾಚಿಕೆ,

ಕಾಲುದಾರಿಯ ಸಿರಿಬೆಳಗು (ಡಾ.ಕೃಷ್ಣಮೂರ್ತಿ ಹನೂರು ಅವರ ಸಾಹಿತ್ಯ ಕುರಿತ ಬರಹಗಳು),

ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ

ಅರಿವಿನೊಳಗಣ ಬೆರಗು

ಕನ್ನಡ ನೋಟ-ಶಾಂತಿಯ ತೋಟ

 ನೀಲಬಯಲಿನ ಕಾರುಣ್ಯಗಂಗೋತ್ರಿ

ಅನುವಾದ:-

            ತೆಲುಗುನಾಡಿನ ತಾಣಗಳು (ಜೈನ-ಬೌದ್ಧ)

            (ಮೂಲ-ತೆಲುಗು: ಡಾ.ಬಿ.ಎಸ್.ಎಲ್.ಹನುಮಂತರಾವ್)

ನಾಟಕ:-

ಯಾರೂ ಅರಿಯದವರು;

ವ್ಯಕ್ತಿಚಿತ್ರ:-

ಡಾ.ಕೃಷ್ಣಮೂರ್ತಿ ಹನೂರು (ಜಾನಪದ ತಜ್ಞರ ವ್ಯಕ್ತಿಚಿತ್ರ)

 

ಪ್ರಶಸ್ತಿ/ಪುರಸ್ಕಾರಗಳು:

·         ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿ(೨೦೦೯) ಹೆಚ್ಚು ಅಂಕ ಗಳಿಸಿದ್ದಕ್ಕೆ ಪ್ರೊ.ಹಾ.ಮಾ.ನಾ ದತ್ತಿ ಬಹುಮಾನ’,

·         ಗಾಂಧೀಜಿಯವರ ಹಿಂದ್ ಸ್ವರಾಜ್ಕೃತಿವಿಮರ್ಶೆಗೆ ಲೋಹಿಯಾ ಸಮತಾ ಪ್ರಶಸ್ತಿ’,

·         ಮೈಸೂರಿನ ಸಾಹಿತ್ಯ ಸಂಘದದಿಂದ ಬಂಗಾರದ ಪದಕ ಪುರಸ್ಕಾರ’,

·         ನವದೆಹಲಿಯ ಯುಜಿಸಿಯಿಂದ ರಾಜೀವ್‌ಗಾಂಧಿ ನ್ಯಾಷನಲ್ ಫೆಲೋಶಿಪ್ಹಾಗೂ

ಜೂನಿಯರ್ ರೀಸರ್ಚ್ ಫೆಲೋಶಿಫ್”,

·         ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಿಲ ಕೃತಿ ಬಹುಮಾನ’,

·         ಮೈಸೂರು ಪ್ರಜಾವಾಣಿಯಿಂದ ಮೈಸೂರು ದಸರಾ ಕಾವ್ಯ ಪುರಸ್ಕಾರ’,

·         ದೇಸಿರಂಗದಿಂದ ಪ್ರೊ.ಕೆ.ರಾಮದಾಸ್ ಲೇಖನ ಪ್ರಶಸ್ತಿ’,

·         ಮೈಸೂರು ಬಳಗದಿಂದ ಪ್ರೊ.ಎಲ್.ಬಸವರಾಜು ಸ್ಮಾರಕ ಸಂಶೋಧನ ಲೇಖನ ಬಹುಮಾನ”,

·         ರಾಜ್ಯ ಯುವ ಬರಹಗಾರರ ಒಕ್ಕೂಟದಿಂದ ಕುದ್ಮುಲ್ ರಂಗರಾವ್ ಪುರಸ್ಕಾರ”,

·         ಜನಚೈತನ್ಯ ಫೌಂಡೇಶನ್ ವತಿಯಿಂದ ಸಾಹಿತ್ಯಕೃಷಿಗಾಗಿ ಜನಚೈತನ್ಯ ಪುರಸ್ಕಾರ”,

·         ಪ್ರಜಾವಾಣಿಯಿಂದ ಯುವವಿದ್ವಾಂಸರ ಸಾಹಿತ್ಯಕೃಷಿಗಾಗಿ ಯುವಸಾಧಕ-೨೦೨೦ ಪುರಸ್ಕಾರ,

·         ವಿಜಯ ಕರ್ನಾಟಕದಿಂದ ರಾಷ್ಟ್ರೀಯ ಯುವದಿನ-೨೦೨೧ಕ್ಕೆ ಯುವಸಾಧಕ-೨೦೨೧ ಪುರಸ್ಕಾರ,

·         ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ “‘ಯುವ ಸಾಹಿತ್ಯ ಕಣ್ಮಣಿದತ್ತಿ ಪ್ರಶಸ್ತಿ”,

·         ೨೦೧೯ರಲ್ಲಿ ಭಾರತ ಸರ್ಕಾರದ ವತಿಯಿಂದ ಶಾಸ್ತ್ರೀಯ ಕನ್ನಡ ಭಾಷೆಗೆ ಯುವ ಸಂಶೋಧಕರು ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪ್ರಶಸ್ತಿ-೨೦೧೯ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪುರಸ್ಕಾರ.

ಕನ್ನಡಮುಖೀ – ಜನಮುಖೀ - ಸಮಾಜಮುಖೀ ಆಶಯದಿಂದ ಭಾಷಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯ.

 ಹೆಚ್ಚಿನ ವಿವರಗಳಿಗೆ ಲಿಂಕ್ ಮೇಲೆ ಒತ್ತಿ ನೋಡಿ

https://vidwan.inflibnet.ac.in/profile/287747

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಡಾ. ಎಂ. ಭೈರಪ್ಪ ( ಕುಪ್ಪನಹಳ್ಳಿ ಎಂ. ಭೈರಪ್ಪ ) Dr. M. Byrappa (Kuppanahalli M. Byrappa)

 ಕಿರುಪರಿಚಯ :- ಡಾ. ಎಂ. ಭೈರಪ್ಪ ( ಕುಪ್ಪನಹಳ್ಳಿ ಎಂ. ಭೈರಪ್ಪ ) Dr. M. Byrappa (Kuppanahalli M. Byrappa) ( ರಾಷ್ಟ್ರಪತಿ ಪ್ರಶಸ್ತಿ – ೨೦೧೯ರ ಮಹರ್ಷಿ ಬಾದರ...