ಕಿರುಪರಿಚಯ :-
ಡಾ.
ಎಂ. ಭೈರಪ್ಪ ( ಕುಪ್ಪನಹಳ್ಳಿ ಎಂ. ಭೈರಪ್ಪ )
Dr.
M. Byrappa (Kuppanahalli M. Byrappa)
( ರಾಷ್ಟ್ರಪತಿ ಪ್ರಶಸ್ತಿ – ೨೦೧೯ರ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪುರಸ್ಕೃತ )
ಊರು: ಕೋಲಾರ
ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮ.
ಹುಟ್ಟಿದ್ದು: ೨೭-೦೬-೧೯೮೬ರಲ್ಲಿ.
ತಂದೆ ಮುನಿಸೊಣ್ಣಪ್ಪ
ಹಾಗೂ ತಾಯಿ ಲಕ್ಷ್ಮಮ್ಮ.
ಓದಿದ್ದು:
ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರದ ಸರ್ಕಾರಿ
ಬಾಲಕರ ಕಾಲೇಜಿನಲ್ಲಿ ಬಿ.ಎ(HEK) ಪದವಿ
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು
ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರ‍್ಯಾಂಕ್‌ನೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ.
ಪಿಎಚ್.ಡಿ:
ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ.ಕೃಷ್ಣಮೂರ್ತಿ
ಹನೂರು ಅವರ ಮಾರ್ಗದರ್ಶನದಲ್ಲಿ “ಆಧುನಿಕ
ಕನ್ನಡ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷ” ಎಂಬ
ವಿಷಯದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ.
ಇತರೆ ಅಧ್ಯಯನ:
‘ಪ್ರಾಚೀನ
ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ‘ಭಾಷಾಂತರ’, ‘ಆಂಗ್ಲ
ಸಾಹಿತ್ಯ’, ‘ಶಾಸನಶಾಸ್ತ್ರ’ ಹಾಗೂ ‘ಪ್ರಾಕೃತ’ - ಈ ವಿಷಯಗಳಲ್ಲಿ
ಸ್ನಾತಕೋತ್ತರ ಡಿಪ್ಲೋಮಾ ಪದವಿಗಳ ಅಧ್ಯಯನ.
ಸೇವಾನುಭವ:
·
ರಾಷ್ಟ್ರೀಯ ಸಂತ ಕನಕದಾಸರ ಸಂಶೋಧನ ಕೇಂದ್ರದ ಕರ್ನಾಟಕ ಸಮಗ್ರ ತತ್ವಪದ
ಯೋಜನೆಯ ಮೈಸೂರು ಜಿಲ್ಲಾ ಕ್ಷೇತ್ರತಜ್ಞರಾಗಿ ಎರಡು ವರ್ಷ ಕಾರ್ಯನಿರ್ವಹಣೆ.
·
ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವಿಭಾಗದಲ್ಲಿ ಒಂದು ವರ್ಷ
ಪತ್ರಕರ್ತ.
·
ಮೈಸೂರು ವಿವಿಯ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ
ಕೇಂದ್ರದಲ್ಲಿ ಎರಡು ವರ್ಷಗಳು ಕನ್ನಡ ಉಪನ್ಯಾಸಕರಾಗಿ ಸೇವೆ.
·
ಮೈಸೂರಿನಲ್ಲಿರುವ ಭಾರತ ಸರ್ಕಾರದ ಶಾಸ್ತ್ರೀಯ ಕನ್ನಡ ಅತ್ಯುನ್ನತ
ಅಧ್ಯಯನ ಕೇಂದ್ರದಲ್ಲಿ ಮೂರುವರೆ ವರ್ಷ ಸಹಸಂಶೋಧಕರಾಗಿ ಕಾರ್ಯನಿರ್ವಹಣೆ.
·
ಸದ್ಯಕ್ಕೆ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ (ಸ್ವಾಯತ್ತ) ಕನ್ನಡ
ಸಹಾಯಕ ಪ್ರಾಧ್ಯಾಪಕರಾಗಿ ಸೇವೆ.
ಸಂಶೋಧನ ಅನುಭವ
·
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ‘ಕೋಲಾರ
ಜಿಲ್ಲೆಯ ದಲಿತ ಹೋರಾಟಗಾರರ ಅನುಭವ ಕಥನಗಳು’
·
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ‘ಕೋಲಾರ
ಜಿಲ್ಲೆಯ ದಲಿತ ಕ್ರೆöÊಸ್ತರ
ಸಾಂಸ್ಕೃತಿಕ ಶೋಧ’.
·
ಕರ್ನಾಟಕ ನಾಟಕ ಅಕಾಡೆಮಿಯ ಸಂಶೋಧನಾ ಯೋಜನೆ ಭಾಗವಾಗಿ ‘ಕನ್ನಡ
ರಂಗಭೂಮಿಯಲ್ಲಿ ಅಂಬೇಡ್ಕರ್‌ಯಾನ’,
·
ಭಾರತ ಸರ್ಕಾರದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ
‘ವಚನ
ಸಾಹಿತ್ಯದಲ್ಲಿ ಬೌದ್ಧತತ್ವ’, ‘ಕನ್ನಡ ಭಕ್ತಿ
ಪರಂಪರೆ ಮತ್ತು ಸಿನಿಮಾ’ ಎಂಬ ಸಂಶೋಧನ ಯೋಜನೆಗಳು.
·
ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಫೆಲೋಷಿಫ್ ಅನುವಾದ ಯೋಜನೆಯ
ಅಂಗವಾಗಿ ತೆಲುಗಿನ ಡಾ.ಬಿ.ಎಸ್.ಎಲ್.ಹನುಮಂತರಾವು ವಿರಚಿತ ‘ಆಂಧ್ರಪ್ರದೇಶದ
ಜೈನಬೌದ್ಧ ಧರ್ಮಗಳು’ ಕೃತಿಯ
ಕನ್ನಡಕ್ಕೆ ಅನುವಾದ
·
ಹಲವಾರು ವಿಚಾರಸಂಕಿರಣಗಳಲ್ಲಿ 8೦ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳ ಮಂಡನೆ.
ಸಾಹಿತ್ಯಕೃಷಿ:
ಕಾವ್ಯ:-
ಬೇಲಿಗಿಡಗಳು
ಮಾತಾಡುತಾವೆ,
ಅರಳಿನೆರಳಿನ
ಗುಡಿಸಲ ಧ್ಯಾನ;
ವಿಮರ್ಶೆ:-
ಕರ್ಣರಸಾಯನ,
ಒಡಲುರಿ,
ನಾಟಕ
ಸಂಸ್ಕೃತಿ ದರ್ಶಕ,
ಸಾಹಿತ್ಯರಂಗದಲ್ಲಿ,
ಜನಮುಖಿ(ಡಾ.ಎಲ್.ಬಸವರಾಜು
ಅವರ ಕೃತಿಕೈಪಿಡಿ),
ಹರಿಶ್ಚಂದ್ರ
ಕಥನ: ನಾಟಕೀಯತೆ ಮತ್ತು ಸಮಕಾಲೀನತೆ,
ಸಂಶೋಧನೆ:-
ಅಂತರಗಂಗವ್ವ,
ಹರಿಹರನ
ರಗಳೆಗಳಲ್ಲಿ ದಲಿತ ಸಂವೇದನೆ,
ಬೌದ್ಧಯಾನಿ
ಚಾಮುಂಡಿ,
ಬಸವ ಸಿನಿಮಾ
ಬುದ್ಧ ಪ್ರತಿಮಾ,
ವಡ್ಡಾರಾಧನೆ
ಕಥನ: ಸಾಂಸ್ಕೃತಿಕ ಅನುಸಂಧಾನ;
ನಿಚ್ಚಂ ಪೊಸತು,
ನಿಸ್ಸೀಮ ನುಡಿಯಾನ
ನುಡಿಕುಲುಮೆಯ ಕಿಡಿಗನ್ನಡಿ
ಸಂಪಾದನೆ:-
ಬುದ್ಧನಗೆಯ
ತಾಯಿನದಿ,
ಬೆಳಕಿನ ತಾಯಿ,
ಸಮತಾ ಪಂಜು,
ಸಂಶೋಧನಯಾನ,
ಬೋಧಿಯಾನ,
ಶರಣಯಾನ,
ಬೆಳಗು ಬೆಳಕೆ
ಕತ್ತಲೊಡಲಿಂದ (ಮೈಸೂರು-ಚಾಮರಾಜನಗರದ ಪ್ರಾತಿನಿಧಿಕ ತತ್ವಪದಗಳು),
ಮುನಿದರ್ಪಣ,
ಗ್ರಾಮೀಣ
ಸಂಸ್ಕೃತಿ ಚರಿತ್ರೆ-ಸಂಪುಟ.೧,
ಮುತ್ತುಮುಳುಗ
(ಡಾ.ಎಲ್.ಬಸವರಾಜು ಜನ್ಮಶತಮಾನೋತ್ಸವ ನೆನಪಿನ ಸಂಪುಟ),
ಶಾಸ್ತ್ರೀಯ
ಕನ್ನಡ ಪಠ್ಯಗಳ ಸಾಂಸ್ಕೃತಿಕ ಅನುಸಂಧಾನ,
ಅಭಿಜಾತ,
ಡಾ.ವಿ.ಎಂ.
ಸಾಹಿತ್ಯ ವಾಚಿಕೆ,
ಕಾಲುದಾರಿಯ
ಸಿರಿಬೆಳಗು (ಡಾ.ಕೃಷ್ಣಮೂರ್ತಿ ಹನೂರು ಅವರ ಸಾಹಿತ್ಯ ಕುರಿತ ಬರಹಗಳು),
ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ
ಅರಿವಿನೊಳಗಣ ಬೆರಗು
ಕನ್ನಡ ನೋಟ-ಶಾಂತಿಯ ತೋಟ
ನೀಲಬಯಲಿನ ಕಾರುಣ್ಯಗಂಗೋತ್ರಿ
ಅನುವಾದ:-
ತೆಲುಗುನಾಡಿನ ತಾಣಗಳು (ಜೈನ-ಬೌದ್ಧ)
(ಮೂಲ-ತೆಲುಗು: ಡಾ.ಬಿ.ಎಸ್.ಎಲ್.ಹನುಮಂತರಾವ್)
ನಾಟಕ:-
ಯಾರೂ
ಅರಿಯದವರು;
ವ್ಯಕ್ತಿಚಿತ್ರ:-
ಡಾ.ಕೃಷ್ಣಮೂರ್ತಿ
ಹನೂರು (ಜಾನಪದ ತಜ್ಞರ ವ್ಯಕ್ತಿಚಿತ್ರ)
ಪ್ರಶಸ್ತಿ/ಪುರಸ್ಕಾರಗಳು:
·
ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿ(೨೦೦೯) ಹೆಚ್ಚು ಅಂಕ
ಗಳಿಸಿದ್ದಕ್ಕೆ ‘ಪ್ರೊ.ಹಾ.ಮಾ.ನಾ
ದತ್ತಿ ಬಹುಮಾನ’,
·
ಗಾಂಧೀಜಿಯವರ ‘ಹಿಂದ್
ಸ್ವರಾಜ್’ ಕೃತಿವಿಮರ್ಶೆಗೆ
‘ಲೋಹಿಯಾ
ಸಮತಾ ಪ್ರಶಸ್ತಿ’,
·
ಮೈಸೂರಿನ ಸಾಹಿತ್ಯ ಸಂಘದದಿಂದ ‘ಬಂಗಾರದ ಪದಕ ಪುರಸ್ಕಾರ’,
·
ನವದೆಹಲಿಯ ಯುಜಿಸಿಯಿಂದ “ರಾಜೀವ್‌ಗಾಂಧಿ
ನ್ಯಾಷನಲ್ ಫೆಲೋಶಿಪ್” ಹಾಗೂ
“ಜೂನಿಯರ್ ರೀಸರ್ಚ್ ಫೆಲೋಶಿಫ್”,
·
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ‘ಯುವ ಬರಹಗಾರರ
ಚೊಚ್ಚಿಲ ಕೃತಿ ಬಹುಮಾನ’,
·
ಮೈಸೂರು ಪ್ರಜಾವಾಣಿಯಿಂದ ‘ಮೈಸೂರು ದಸರಾ ಕಾವ್ಯ ಪುರಸ್ಕಾರ’,
·
ದೇಸಿರಂಗದಿಂದ ‘ಪ್ರೊ.ಕೆ.ರಾಮದಾಸ್
ಲೇಖನ ಪ್ರಶಸ್ತಿ’,
·
ಮೈಸೂರು ಬಳಗದಿಂದ “ಪ್ರೊ.ಎಲ್.ಬಸವರಾಜು
ಸ್ಮಾರಕ ಸಂಶೋಧನ ಲೇಖನ ಬಹುಮಾನ”,
·
ರಾಜ್ಯ ಯುವ ಬರಹಗಾರರ ಒಕ್ಕೂಟದಿಂದ “ಕುದ್ಮುಲ್
ರಂಗರಾವ್ ಪುರಸ್ಕಾರ”,
·
ಜನಚೈತನ್ಯ ಫೌಂಡೇಶನ್ ವತಿಯಿಂದ ಸಾಹಿತ್ಯಕೃಷಿಗಾಗಿ “ಜನಚೈತನ್ಯ
ಪುರಸ್ಕಾರ”,
·
ಪ್ರಜಾವಾಣಿಯಿಂದ ಯುವವಿದ್ವಾಂಸರ ಸಾಹಿತ್ಯಕೃಷಿಗಾಗಿ ಯುವಸಾಧಕ-೨೦೨೦
ಪುರಸ್ಕಾರ,
·
ವಿಜಯ ಕರ್ನಾಟಕದಿಂದ ರಾಷ್ಟ್ರೀಯ ಯುವದಿನ-೨೦೨೧ಕ್ಕೆ ಯುವಸಾಧಕ-೨೦೨೧
ಪುರಸ್ಕಾರ,
·
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ “‘ಯುವ ಸಾಹಿತ್ಯ
ಕಣ್ಮಣಿ’ ದತ್ತಿ
ಪ್ರಶಸ್ತಿ”,
·
೨೦೧೯ರಲ್ಲಿ ಭಾರತ ಸರ್ಕಾರದ ವತಿಯಿಂದ ಶಾಸ್ತ್ರೀಯ ಕನ್ನಡ ಭಾಷೆಗೆ ಯುವ
ಸಂಶೋಧಕರು ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ನೀಡುವ ರಾಷ್ಟ್ರಪತಿ ಪ್ರಶಸ್ತಿ-೨೦೧೯
ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪುರಸ್ಕಾರ.
ಕನ್ನಡಮುಖೀ – ಜನಮುಖೀ
- ಸಮಾಜಮುಖೀ ಆಶಯದಿಂದ ಭಾಷಿಕ,
ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯ.